Hanigavanagalu By Dundiraj and Rathish Kumar

Kannada Short Poems By Rathish Kumar Acharya

ತಪ್ಪಾದರೂ ಏನು ಚೆಲುವೆ ?


ನಾನು ಮಾಡಿದ ತಪ್ಪಾದರೂ ಏನು ಚೆಲುವೆ ?
ಮತ್ತೇಕೆ ನನ್ನ ಕಣ್ಣಲ್ಲೇ ಕೊಲುವೆ ?
ಕನಸಿನ ಸ್ವರ್ಗದಲ್ಲಿ ಕೇವಲ ನಾವೇ ,
ಇಷ್ಟು ಕೆಡಿಸಬೇಕಿತ್ತೆ ನನ್ನೊಲವೇ ??
 

ಆ ನಿನ್ನ ತುಂಟ ನಗೆHappy-Valentines-Day-2014-Kannada-wallpaper

ಆ ನಿನ್ನ ತುಂಟ ನಗೆ ,
ಹುಚ್ಚು ಹಿಡಿಸಿಧೆ ನನಗೆ ,
ನನ್ನೆಧೆಯ ಹಾಧಿಯಲ್ಲೊಮ್ಮೆ ನೀ ನಡೆದು ಹೋಗೆ ,,
ತಡೆ ತಡೆಧು ಹೋಗೆ ………….


ಹೃಧಯ ಕದ್ಧಾಕೆ ?


ನೀನೇನಾ ನನ್ನ ಹೃಧಯ ಕದ್ಧಾಕೆ ?
ನನಗೇನೋ ನಿನ್ನ ಮೇಲೆಯೇ ಶಂಕೆ ,
ಬೆಳೆಸಿದ್ಧೆ ಗುಲಾಬಿ ನಿನಗಂತಲೇ ಕೊಡೋಕೆ,
ಕೊಡುವಸ್ಟರಲ್ಲಿ ತಿಂದು ಹಾಕಿತ್ತು ಯಾವುದೋ ಮೇಕೆ .


CHELUVE NEENYARU????


ಪ್ರೀತಿ ಮಾಡಿ
ಹೃದಯ ಸುಟ್ಟುಕೊಂಡ
ಗಟನೆಗಳು
ಹಲವಾರು …..
ಹೊಸದೊಂದು
ಬೆಂಕಿ ಪೊಟ್ಟಣ
ಹಿಡಿದು ಬಂದ ಚೆಲುವೆ
ನೀನ್ಯಾರು ??


ಕೊಟ್ಟು ಹೋಧನು ಕೂಸು


ಕಾಲೇಜು ಪಾಸು
ಮಾಡೋದು ಮರೆತು
ಪ್ರತಿದಿನ
ತಾಸುಗಟ್ಟಲೆ ಮಾತು
ಕೊಡ್ತಿನಂತ ಕಿಸ್ಸು
ಕೊಟ್ಟು ಹೋಧನು ಕೂಸು
Avalu nanage bassinalli sikkalu,
nanna nodi nakkalu,
namagiga eradu makkalu……ಅವಳು ನನಗೆ  ಬಸ್ಸಿನಲ್ಲಿ ಸಿಕ್ಕಳು ,
ನನ್ನ ನೋಡಿ ನಕ್ಕಳು ,
ನಮಗೀಗ ಎರಡು ಮಕ್ಕಳು . (Dundiraj)ಕಾಲೇಜ್ ಹುಡುಗರ ಜೀವನ ,
ಕಮ್ಮಿ ಕಾಸಿದ್ರೆ ಧೂಮಪಾನ ,
ಜಾಸ್ತಿ ಕಾಸಿದ್ರೆ ಮದ್ಯಪಾನ ,
ಇನ್ನು ಸ್ವಲ್ಪ ಜಾಸ್ತಿ ಇದ್ರೆ
ಬೈಕಿನಲ್ಲಿ ಕಲ್ಪನಾ ,
ಎಲ್ಲಿ ಕಾಣುವರು ಜನ ?
ಕೊನೆಗೊಮ್ಮೆ ಎಕ್ಷಮ್ನಲ್ಲಿ
ಮೈ ಎಲ್ಲ ಕಂಪನ .


ನನ್ನ ಹೆಂಡ್ತಿ


ಅಪರೂಪಕ್ಕೆ ಬಂದವಳು
ರೂಪವತಿ ನನ್ನ ಹೆಂಡ್ತಿ
ನನ್ನವಳಿಗಂತೂ
ನನ್ಮೇಲೆ ಬಲು ಪ್ರೀತಿ
ನಂಗೂ,
ವಯಸಾಗ್ತ ಬಂತು,
ಮೈ ಮಾಗ್ತ ಬಂತು,
ಹುಡುಕಲೇನೆ ನಾನು
ನಿನಗಂತ ಹೊಸ “ಸವತಿ”


ಗೊರಕೆ


ಒಳ್ಳೆ ಗಂಡನ ಪಡೆಯಲು
ಹೊತ್ತಿದ್ಧೆ ಹಲವು ದೇವರ ಹರಕೆ
ಆದರೀಗ ನನ ಗಂಡ
ಬಿಡುವುದಿಲ್ಲ ನಿದ್ರೆ ಮಾಡೋಕೆ.
ಅಯಯ್ಯೋ……!
ಹಾಗೇನಿಲ್ಲಾರಿ
ರಾತ್ರಿಯಿಡೀ ಬಾರೀ ಗೊರಕೆ….


ನನ್ನವಳು ನಕ್ಕಾಗ


ನನ್ನವಳು ನಕ್ಕಾಗ
ಉದುರಿದವೆಷ್ಟೋ ಮುತ್ತು…
ಹೆಕ್ಕಿಕೊಳ್ಳಲು ನಾನೇನು
ಹಕ್ಕಿಯೇ?
ನಿನ್ನ ಪ್ರಿಯಕರರ ಲೆಕ್ಕ
ನನಗೂನು ಗೊತ್ತು.


ಪ್ರೇಮ ಸಾಗರದಲಿ


ಪ್ರೇಮ ಸಾಗರದಲಿ
ಕೊಚ್ಚಿ ಹೋದವನು ನಾ
ನಿನ್ನದೇ ಸಂತೆಯಲಿ
ನನ್ನ ಮರೆತವನು ನಾ
ಕೈ ಕೊಡುವ ಮುನ್ನ
ಒಮ್ಮೆ ಹೇಳೆ ಚಿನ್ನ,
ಕಣ್ಮುಚ್ಚಿದರೂ ಅಳಿಸದಂತೆ
ಕಣ್ತುಂಬಿಸಿಕೊಳ್ಳುವೆ ನಿನ್ನ….


ಭಾರತ ನಂದು ಕನಾ೯ಟಕ ನಂದು….


ಭ್ರಷ್ಟಾಚಾರಿಗಳು
ರಾಜಕಾರನಕ್ಕೆ ಬಂದು,
ವಾರಕ್ಕೊಮ್ಮೆ
ಕನಾ೯ಟಕ ಭಂದು
ಭಾರತ ಭಂದು,
ಎಧ್ದೇಳಿ ಜನರೇ,
ನಿದ್ದೆಯಿಂದೆದ್ದೇಳಿ
ಮುಂದೆಂದಾದರೂ ಅಂದಾರು
ಭಾರತ ನಂದು
ಕನಾ೯ಟಕ ನಂದು….


ತಾಜ ಮಹಲು


ಕಟ್ಟಬೇಕಿತ್ತು ನಿನಗೆ
ನಾ ತಾಜ ಮಹಲು
ಆಧರೆ ತಂದು ಕೊಟ್ಟಿರುವೆ
ತಾಜ ಹಣ್ಣು ಹಂಪಲು,
ತಿಂದು ಭೀಜವನ್ನಾದರೂ ಉಳಿಸು,
ಅಷ್ಟೇ ಸಾಕು
ನನ್ನ ಹಸಿವು ನೀಗಲು…


ಕಣ್ಮುಚ್ಚುವ ಮುನ್ನ


ಕ್ಷಣ ಕಾಲ ತೆರೆದಿಡುವೆ
ನನ್ನಿ ಎದೆಯನ್ನ
ನೋಡು ಭಾ ಗೆಳತಿ
ನನ್ನೊಳಗೆ ನಿನ್ನ…
ಅಲ್ಲಲ್ಲಿ ಹುದುಗಿಹುದು
ನೀ ಬಿಟ್ಟ ಹೂ ಭಾಣ
ಕತ್ತೊಗೆದು ಅಪ್ಪಿಕೋ
ಕಣ್ಮುಚ್ಚುವ ಮುನ್ನ….

ಮುಂಗಾರಿನ ಮಿಂಚು (VINAY A D)

ನನ್ನವಳ ನಗು
ಮುಂಗಾರಿನ ಮಿಂಚು,
ನನ್ನವಳ ನಗು
ಮುಂಗಾರಿನ ಮಿಂಚು,
ಕೆರಳಿ ಮುಟ್ಟಿದರೆ
ಆಗುವಳು ಹೆಂಚು….

ಪ್ರೇಮದಾರೆ

ಇರುಳುಗಳ ನಡುವಲ್ಲಿ
ಕನಸುಗಳ ತೆರೆಯಲ್ಲಿ
ನಿನ್ನ ಬಿಂಭಗಳು ಪ್ರಿಯೆ
ಮತ್ತೆ ಮತ್ತೆ ನಡೆದಿವೆ….
ಕತ್ತರಿಸಿ ಹೋಗಿರುವ
ಪ್ರೇಮ ಭಳ್ಳಿಯ ಚೆಲುವೆ
ಮತ್ತೆ ನೆಡುವೆಯಾ
ನಿನ್ನ ಪ್ರೇಮದಾರೆಯ
ಹರಿಸಿ….?

KANNADA SHAYARI IN SPARSHA FILM

ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ,
ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ,
ನಿನ್ನ ಒಮ್ಮೆ ನೆನೆದು ನನ್ನ ಮನಸು ಮೆತ್ತಗಾಯಿತಲ್ಲ.

ಪೆನ್ನು ಕದ್ಧಿಧ್ದು…?

ಕವಿತೆ ಬರೆಯಲು ಕುಳಿತಾಗ
ನಿನ್ನದೇ ನೆನಪು,
ಕವಿತೆ ಬರೆಯಲು ಕುಳಿತಾಗ
ನಿನ್ನದೇ ನೆನಪು,
ಯಾಕೆ ಅಂದ್ರೆ
ನೀನೆ ಅಲ್ಲವೇ ನನ್ನ ಪೆನ್ನು ಕದ್ಧಿಧ್ದು…?

Dundiraj Hanigavanagalu

ಹೋಲಿಕೆ :
ನಡು ವಯಸ್ಸಿನ
ಗೃಹಿಣಿಯಾದರೂ
ಈಕೆ
ಶಿಲಾಬಾಲಿಕೆ
ಬೇಕಿದ್ದರೆ ನೀವೇ ನೋಡಿ
ಸದಾಕೈಯಲ್ಲಿ ಕನ್ನಡಿ!

ಅಂತಿಮ :
ಸತ್ತ ಮೇಲೆ
ಸತ್ತವರನ್ನು ಮರೆಯುತ್ತಾರೆ ಜನ
ಆದ್ದರಿಂದಲೇ
ಸತ್ತ ತಕ್ಷಣ
ಅಂತಿಮ ನಮನ!

ಯಾಕೆ :
ವಿದ್ಯುತ್ತಿಗಾಗಿ
ನೀರಿಗಾಗಿ
ಯಾಕೆ ಸುಮ್ಮನೆ
ಆಣೆಕಟ್ಟು
ಹೆಂಗಸರ ಕಣ್ಣುಗಳಲ್ಲಿ
ಎರಡೂ ಇವೆಯಲ್ಲ
ಬೇಕಾದಷ್ಟು

ಉದಾರಿ :
ನಾನು ಪ್ರೀತಿಸಿದ ಹುಡುಗಿ
ತುಂಬಾ ಉದಾರಿಯಾಗಿದ್ದಳು
ಒಂದು ಕೇಳಿದರೆ
ಹತ್ತು ಕೊಡುತ್ತಿದ್ದಳು
ಉಂಗುರ ತೋಡಿಸಲು
ಬೆರಳು ಕೊಡು” ಎಂದಾಗ
ಕೈ ಕೊಟ್ಟಳು.

ಈಕೆ :
ನಕ್ಕರೆ ಈಕೆ
ದಂತದ ಗೊಂಬೆ
ಅತ್ತರೆ
ಅಯ್ಯೋ
ಆಗುಂಬೆ

ಏಕತಾನ :
ಬ್ಯಾಂಕ್ ಜೀವನದ
ಏಕತಾನದಿಂದ
ರೋಸಿ ಹೋಗಿ
ಎಲ್ಲ ಮರೆತು ಹಾಯಾಗಿ
ಸುತ್ತಾಡಿ ಬರಲೆಂದು
ರೈಲು ಹತ್ತಿದರೆ ಅಲ್ಲೂ
ಅದೇ ಸೊಲ್ಲು
ಚಕ್ ಬುಕ ಚಕ್ ಬುಕ್
ಚೆಕ್ ಬುಕ್

ಸತ್ಯ :
ಸುಳ್ಳಿಗೆ ಸುಳ್ಳು
ಸೇರಿದರೆ
ಸತ್ಯ.
ಉದಾಹರಣೆಗೆ
ನಮ್ಮ ದಾಂಪತ್ಯ!

ಕಷ್ಟ :
ಅಯ್ಯೋ ಪಾಪ!
ಪಾಂಚಾಲಿಯ ಕಷ್ಟ
ಹೇಳತೀರದು
ಎಲ್ಲರ ಹಾಗೆ ಗಂಡ
ಒಂದಲ್ಲ ಐದು.
ಸ್ವರ ಬಿದ್ದು ಹೋಗಿ
ನೋಯುತ್ತಿದೆ ಗಂಟಲು
ಗಂಡಂದಿರನ್ನು
ಬೈದು ಬೈದು

ಎದ್ದೇಳಿ ಬೆಳಗಾಯಿತು :
ಹೇಳುತ್ತಲೆ ಇದ್ದಳು ಕನ್ನಡಾಂಬೆ
ಎದ್ದೇಳಿ ಕನ್ನಡಿಗರೆ ಬೆಳಗಾಯಿತುಬೆಳಗಾಯಿತು
ಈಗಲೂ ಹೇಳುತ್ತಿದ್ದಾಳೆ
ಇನ್ನಾದರೂ ಏಳಿ ಬೆಳ್ಳಗಾಯಿತು
ಗಡ್ಡ ಬೆಳ್ಳಗಾಯಿತು

ಸತ್ಯಪ್ರಿಯತೆ :
ಹೇಗಿದೆ ನೋಡಿ
ಭಾರತೀಯರ ಸತ್ಯಪ್ರಿಯತೆ
ಕಳ್ಳ ನೊಟಿನಲ್ಲೂ
ಅಚ್ಚಾಗಿರತ್ತೆ

ಸತ್ಯಮೇವ ಜಯತೆ !!!


No comments:

Post a Comment

Leave your Comment....