Uttara karnataka love letter..

ಉತ್ತರ ಕರ್ನಾಟಕ ಸ್ಟೈಲ್ ಲವ್ಲೆಟರ್..

ಪ್ರೀತಿಯ ನಿಂಗವ್ವ,

ಏ ಇಕಿನ, ನೋಡವಾ ನಾ ಹೈಸ್ಕೋಲ್ ಸಾಲಿಗೆ ಯಾವತ್ತಕಾಲಿಟ್ನ್ಯೋ ಅವತ್ತಿಂದ ನಿನ್ನ ನೋಡಿದಾಗೊಮ್ಮೆ ನನ್ನ ಮೈ ಜುಮ್ಅಂತತಿ.
ನಿನ್ನ ದನಿ ಕೇಳಿದ್ರ ಅವ್ನವ್ನ್ ಕೇಳಕೊಂತ ಇರಬೇಕ ಅನಸ್ತತಿ.ಇನ್ನ,
ನೀ ನನ್ನ ಜೊತಿ ಮಾತಾಡುವಾಗಂತೂ ಎದಿಡವಾ ಡವಾ ಅಂತಿರತತಿ. ನಿ ನನ್ನ ಕಣ್ಣಾಗ ಕಣ್ಣಿಟ್ಟ ನೋಡ್ತಿಯಲ್ಲಅದರ ಅರ್ಥ ಏನ..? ನೀ ಹಂಗ ನೋಡಿದಾಗೊಮ್ಮೆ ನಾ ಕಕ್ಕಾ-ಬಿಕ್ಕಿ ಅಕ್ಕನಿ ಗೊತ್ತನ...? ಏನರ ಆಗ್ಲಿವಾ, ನನಗಂತು ನಿನ್ನ ಮ್ಯಾಗ ಡಿಂಗ್-ಡಾಂಗ್ ಶುರು ಆಗೇತಿ. ನಿನಗೂ ನನ್ನ ಮ್ಯಾಗ ಡಿಂಗ್-ಡಾಂಗ್ ಇದ್ದರ ಇವತ್ತ ಚಂಜೀಮುಂದ ಸಾಲಿ ಗ್ರೌಂಡ್ ಹಂತೇಲೆಕಾಯ್ತಿರ್ತನಿ ಬಂದ ಹೇಳ.. ನಿಂಗೇನ್ ನನ್ನ ಮ್ಯಾಲೆ ಡಿಂಗ್-ಡಾಂಗ್ ಇಲ್ಲಾ ಅಂದ್ರೂ ಬಂದ ಹೇಳಿಕ್ಯಾಸ್, ಈ ಕಾಗದಾ ವಾಪಾಸ್ ಕೊಟ್ಟ್ ಹೋಗು..ನಡಿತೇತಿ.. ನಾ ಗಟ್ಟಿ ಮನಸ ಮಾಡಿ ತಡಕೊಂತನಿ.. ನಾಚಾಕ ಹೋಗ್ಬ್ಯಾಡಾ..ಅದನ್ನ ಬಿಟ್ಟ ನೀ ಏನರ ಮಾಸ್ತರ್ ಮುಂದ್ ಹೇಳಿದ್ನಿ,ಇಲ್ಲಾ ನಿಮ್ಮಪ್ಪನ ಮುಂದ ಹೇಳಿದ್ನಿ ಮಾಡಿದೆಂದರ,,,


ಮಗಳ ಬರ್ತೀಯನ ನಾಳಿಂದ ನೀ ಸಾಲಿಗೆ..

ನಿನ್ನ ಡಿಂಗ್-ಡಾಂಗ್